ಕಲಾವಿದರಿಂದ ಗಂಗಾವತಿ ಶಾಸಕರಿಗೆ ಭಾವಚಿತ್ರ ಕೊಡುಗೆ

ಕಲಾವಿದರಿಂದ ಗಂಗಾವತಿ ಶಾಸಕರಿಗೆ ಭಾವಚಿತ್ರ ಕೊಡುಗೆ

ಕೊಪ್ಪಳ, ಜು.07 : ಗಂಗಾವತಿಯ ಬಿಜೆಪಿ ಕಾರ್ಯಾಲಯದಲ್ಲಿ ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಶುಕ್ರವಾರ ಬೆಂಗಳೂರಿನ ಆದಿತಿ ಕಲಾವಿದರ ತಂಡವು ಶಾಸಕರ ಭಾವಚಿತ್ರವನ್ನು ಬಿಡಿಸಿ ಕೊಡುಗೆಯಾಗಿ ನೀಡಿದರು. ಶಾಸಕರ ಭಾವಚಿತ್ರ ಬಿಡಿಸಿದ ಕಲಾವಿದೆ ಕಾವೇರಿ ಮಾತನಾಡಿ, ಮುಂಚೆಯಿಂದಲೂ ಶಾಸಕ ಪರಣ್ಣ ಮುನವಳ್ಳಿ ಅವರ ಮೇಲೆ ನನಗೆ ಅಪಾರ ಗೌರವವಿದೆ. ಹಾಗಾಗಿ ನಾನು ಚಿತ್ರಕಲಾವಿದೆಯಾಗಿರುವುದರಿಂದ ಅವರಿಗೆ ಅವರ ಚಿತ್ರವನ್ನು ಬಿಡಿಸಿ ಕೊಡಬೇಕು ಎಂದು ಅಭಿಲಾಷೆ ಹೊಂದಿದ್ದೆ, ಆನಿಟ್ಟಿನಲ್ಲಿ ಇಂದು ಅವರ ಭಾವಚಿತ್ರವನ್ನು ಬಿಡಿಸಿ ಅವರಿಗೆ ಕೊಡುಗೆಯಾಗಿ ನೀಡಿದ್ದೇನೆ ಎಂದರು. ನಂತರ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಈ ಕಲಾವಿದರು ಬಿಡಿಸಿದ ನನ್ನ ಚಿತ್ರದ ಕಲೆಗೆ ಯಾವುದೇ ಕಾರಣಕ್ಕೂ ಬೆಲೆಯನ್ನು ಕಟ್ಟಲಾರೆ. ಏಕೆಂದರೆ ಕಲೆ ಎಂಬುದು ಆ ದೇವರ ಕೊಟ್ಟ ಕೊಡುಗೆ. ಹಾಗಾಗಿ ಆ ವಿದ್ಯಾರ್ಥಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಶಿಕ್ಷಕರು ಮತ್ತು ಅವರ ತಂದೆ ತಾಯಿ ಒಳ್ಳೆಯ ಕಲೆಯನ್ನು ಮಾಡಲಿಕ್ಕೆ ಪ್ರೋತ್ಸಾಹ ನೀಡಲಿ ಎಂದು ಹರಸಿದರು. ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಚನ್ನಪ್ಪ ಮಳಿಗಿ, ನಗರ ಮಂಡಲ ಅಧ್ಯಕ್ಷ ಕಾಶೀನಾಥ್ ಚಿತ್ರಗಾರ, ಶಾಸಕರ ಪುತ್ರ ಸಾಗರ್ ಮುನವಳ್ಳಿ, ನಗರಸಭೆ ಸದಸ್ಯರಾದ ಉಮೇಶ ಸಿಂಗನಾಳ, ಪ್ರಮುಖರಾದ ಸಂಗಯ್ಯಸ್ವಾಮಿ ಸಂಶಿಮಠ, ಕನಕರಾಯ ನಾಯಕ, ಕಲಾವಿದರಾದ ಎಚ್.ಎಮ್.ಆನಂದ, ಶಿವಕುಮಾರ್, ಚಿದಂಬರಿ, ದಯಾನಂದ ಹಾಗೂ ಇತರರು ಇದ್ದರು.