34 ಜನರ ವರದಿ ನೆಗಟಿವ್, ಕೊಪ್ಪಳದ ಜನತೆಗೆ ಬಿಗ್ ರಿಲೀಫ್

34 ಜನರ ವರದಿ ನೆಗಟಿವ್, ಕೊಪ್ಪಳದ ಜನತೆಗೆ ಬಿಗ್ ರಿಲೀಫ್

ಕೊಪ್ಪಳ: ಕಂಪ್ಲಿ ಸೋಂಕಿತನ ಪ್ರಾಥಮಿಕ ಸಂಪರ್ಕ ಹೊಂದಲಾಗಿದ್ದ ಗಂಗಾವತಿಯ 34 ಜನರನ್ನು ಕ್ವಾರಂಟೈನ್ ಮಾಡಲಾಗಿತ್ತು. ಎಲ್ಲರ ವರದಿಯಲ್ಲಿ ನೆಗಟಿವ್ ಬಂದಿದ್ದು, ಕೊಪ್ಪಳ ಜನತೆಗೆ ಬಿಗ್ ರಿಲೀಪ್ ಸಿಕ್ಕಿದೆ. ಕಂಪ್ಲಿ ಸೋಂಕಿತ ಬೆಂಗಳೂರಿನಿಂದ ಆಗಮಿಸಿ ಗಂಗಾವತಿ ಮೂಲಕ ಕಂಪ್ಲಿಗೆ ತೆರಳಿದ್ದ. ಈತನೊಂದಿಗೆ ಪ್ರಯಾಣ ಮಾಡಿದವನ್ನು ಕ್ಯಾರೈಟೈನ್ ಮಾಡಿ ಗಂಟಲು ದ್ರವ ಹಾಗೂ ರಕ್ತದ ಮಾದರಿ ಟೆಸ್ಟ್ಗೆ ಕಳಿಸಲಾಗಿತ್ತು ಇಂದು ಎಲ್ಲರ ವರದಿಯೂ ನೆಗಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ ತಿಳಿಸಿದ್ದಾರೆ. ಭಯ ಭೀತಿಯಲ್ಲಿದ್ದ ಗಂಗಾವತಿಯ ಜನತೆಗೆ ಸ್ನೆಲ್ಪ ಮಟ್ಟಿಗೆ ನೆಮ್ಮದಿ ಸಿಕ್ಕಂತಾಗಿದೆ.